ಬೆಂಗಳೂರು:(ಫೆ05): ವಿಶ್ವದಾದ್ಯಂತ ದಾಖಲೆ ಬರೆದ ಕೆಜಿಎಫ್ ಚಿತ್ರ ಇಂದು ಅಮೆಜಾನ್‍ನಲ್ಲಿ ರಿಲೀಸ್ ಆಗಲಿದೆ ಎಂಬ ವಿಚಾರದ ಕುರಿತು ಫೆ 03 ರಂದು ಅಮೆಜಾನ್ ಪ್ರೈಂ ವಿಡಿಯೋ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದು, ಅದರಲ್ಲಿ ಫೆಬ್ರುವರಿ 05 ರಂದು ಕೆಜಿಎಫ್ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಲಾಗಿದೆ.

ಅಮೆಜಾನ್ ಪ್ರೈಂ ನಲ್ಲಿ ಕನ್ನಡ, ತಮಿಳು, ತೆಲಗು, ಮಲೆಯಾಳಂ ಭಾಷೆಯಲ್ಲಿರು ಚಿತ್ರವನ್ನು ನೋಡ ಬಹುದು. ಆದರೆ ಹಿಂದಿ ಭಾಷೆಯ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿಲ್ಲ.

ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಮೂಲಕ ಭಾರೀ ಹೆಸರು ಮಾಡಿದ್ದಾರೆ. ಈ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.

 

ಕೆಜಿಎಫ್ ಬಿಡುಗಡೆಯಾದ ದಿನದಿಂದ ಹಿಡಿದು ಇದುವರೆಗೂ ಭಾರೀ ಕಲೆಕ್ಷನ್ ಮಾಡಿದ್ದು, ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಮೂಲಗಳ ಪ್ರಕಾರ ಈಗ ಅಮೆಜಾನ್ ಪ್ರೈಂ ವಿಡಿಯೋ ಕೆಜಿಎಫ್ ಸಿನಿಮಾಗೆ ಹದಿನೆಂಟು ಕೋಟಿ ರೂ ನೀಡುವುದರ ಮೂಲಕ ಸಿನಿಮಾದ ನಾಲ್ಕು ಭಾಷೆಯ ಹಕ್ಕನ್ನು ಖರೀದಿಸಲಾಗಿದೆ ಎನ್ನಲಾಗಿದೆ.