ಬೆಂಗಳೂರು(ಜ:31):ಇಂದು ಕನ್ನಡದ ಖ್ಯಾತ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮ ದಿನಾಚರಣೆ. ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದಂತ ದ. ರಾ. ಬೇಂದ್ರೆಯವರು 1896 ರ ಜನವರಿ 31ರಂದು ಜನಿಸಿದರು. ಮೂಲತಃ ಮಹಾರಾಷ್ಟ್ರದವರಾದ ಇವರು ನಂತರ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ಹುಬ್ಬಳ್ಳಿಯ ಲಕ್ಷ್ಮೀಬಾಯಿ ಅವರನ್ನು ವಿವಾಹವಾದರು .ಇವರ ತಂದೆ ರಾಮಚಂದ್ರ ಭಟ್ಟ ,ತಾಯಿ ಅಂಬವ್ವ. ಅಂಬವ್ವ ಅವರ ಪುತ್ರನಾದ ಇವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದರು. ಅಧ್ಯಾಪಕರಾಗಿದ್ದ ಇವರು ತುಂಬಾ ಸರಳ ಜೀವಿಯಾಗಿದ್ದರು. ಇವರು ಅನೇಕ ಕಥೆ, ಕವನ ಸಂಕಲನ, ಗಳಿಂದ ಪ್ರಸಿದ್ಧರಾದರು, ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇಂದಿನ ಸುಗಮ ಸಂಗೀತ ಕ್ಷೇತ್ರದಲ್ಲಿ ದ ರಾ ಬೇಂದ್ರೆಯವರ ಅನೇಕ ಗೀತೆಗಳು ಪ್ರಸಿದ್ಧವಾಗಿವೆ. ಇವರ ಕುರುಡು ಕಾಂಚಾಣ ಕುಣಿಯುತ್ತಲಿತ್ತು ಪ್ರಸ್ತುತ ದಿನದಲ್ಲಿನ ವಾಸ್ತವಿಕತೆಯನ್ನು ತಿಳಿಸುತ್ತದೆ. ದ ರಾ ಬೇಂದ್ರೆ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.