ತುಮಕೂರು(ಜ:31):ನಡೆದಾಡುವ ದೇವರು ಎಂದೇ ಹೆಸರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ 11 ನೆ ದಿನದ ಪುಣ್ಯತಿಥಿಯನ್ನು ಎಂದು ಸಿದ್ಧಗಂಗಾ ಮಠದಲ್ಲಿ ಆಚರಿಸಲಾಗುತ್ತಿದೆ. ಸಹಸ್ರಾರು ಬಡಮಕ್ಕಳಿಗೆ ವಿದ್ಯಾದಾನವನ್ನು ಮಾಡಿದಂತಹ ಶ್ರೀಗಳು ಇತ್ತೀಚಿಗಷ್ಟೇ ನಮ್ಮನ್ನು ಅಗಲಿದ್ದರು. ಇಂದು ಶ್ರೀಗಳ ಕಂಚಿನ ಪ್ರತಿಮೆಯನ್ನು ಸಿದ್ದಗಂಗಾ ಮಠದ ಆವರಣದಲ್ಲಿ ಅನಾವರಣಗೊಳಿಸಲಾಗುತ್ತದೆ. ಶ್ರೀಗಳು ಹಿಂದೆ ಜೀವಂತವಿರುವಾಗ ಈ ಪ್ರತಿಮೆಯ ಅನಾವರಣ ಗೊಳಿಸುವುದನ್ನು ನಿರಾಕರಿಸಿದ್ದರು. ಈ ಕಂಚಿನ ಪ್ರತಿಮೆಯನ್ನು ಶಾಮನೂರು ಶಿವಶಂಕರಪ್ಪನವರು ನೀಡಿದ್ದುಈ ಪ್ರತಿಮೆ 300 ಕೆ ಜಿ ತೂಕವನ್ನು ಹೊಂದಿದೆ.ಶ್ರೀಗಳು ನಿರಾಕರಿಸಿದ ಕಾರಣ ಒಂದು ಕೊಠಡಿಯಲ್ಲಿ ಇಡಲಾಗಿತ್ತು.ಪುಣ್ಯತಿಥಿಯ ಈ ದಿನ ಲಕ್ಷಾಂತರ ಜನರಿಗೆ ದಾಸೋಹ ಏರ್ಪಡಿಸಲಾಗಿದೆ