ಇಂದು ಬೆಂಗಳೂರಿನ ಕೆಲವೆಡೆ ಕಾವೇರಿ ನೀರು ವ್ಯತ್ಯೆಯ

ಬೆಂಗಳೂರು:(ಫೆ08): ಇಂದು ಬೆಂಗಳೂರಿನ ಕೆಲವಡೆ ಕಾವೇರಿ ನೀರು ವ್ಯತಯವಾಗಲಿದೆ. ಜಲಮಂಡಳಿಯ ತೊರೆಕಾಡನಹಳ್ಳಿಯಲ್ಲಿನ ಪಂಪಿಂಗ್ ಕೇಂದ್ರದಲ್ಲಿ ತಾಂತ್ರಿಕ ದೋಷಉಂಟಾಗಿರುವುದರಿಂದ ದುರಸ್ತಿ ಕಾರ್ಯ ನಡೆಯುತ್ತಿದೆ ಇದರಿಂದ ನೀರು ವ್ಯತಯವಾಗಲಿದೆ ಎನ್ನಲಾಗಿದೆ.

ಈಗಾಗಲೆ ಕಾಮಗಾರಿಯು ರಭಸದಿಂದ ಸಾಗುತ್ತಿದ್ದು, ನಿನ್ನೆಯಿಂದ ಆರಂಭವಾದ ಕಾಮಗಾರಿಯು ಇಂದು ಸಂಜೆಯ ವೇಳೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ದುರಸ್ತಿ ಕಾರ್ಯಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಇಂದು ಸಂಜೆ ವೇಳೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.