ಬೆಂಗಳೂರು:(ಜ24): ಕೃಷ್ಣ ಲೀಲಾ ಹಾಗೂ ಕೃಷ್ಣ ರುಕ್ಕು ಹೀರೋ ಅಜಯ್ ರಾವ್, ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಅಜಯ್‍ರಾವ್ ಅಭಿಮಾನಿಗಳಿಗೆ ಇಂದು ಸಂತೋಷ ಸಡಗರದ ದಿನವಾಗಿದೆ. ಇದರ ಮದ್ಯವೆ ಅಭಿಮಾನಿಗಳಿಗೊಂದು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.

ಹೊಸ ಸಿನಿಮಾ ಒಂದರಲ್ಲಿ ನಟಿಸಲು ತಯಾರಾಗಿದ್ದಾರಂತೆ ಅಜಯ್. ಈ ಸಿನಿಮಾವನ್ನು ಗೋವಿಂದ ರಾಜು ಹಾಗೂ ಕೃಷ್ಣ ಮೂರ್ತಿ ನಿರ್ಮಾಣ ಮಾಡಲಿದ್ದು, ಗೋಕುಲ ಎಂಟರ್‍ಟ್ರೇನರ್ಸ್ ಬ್ಯಾನರ್‍ನಡಿ ಸಿನಿಮಾ ತಯಾರಗಲಿದೆ.

ಹುಟ್ಟು ಹಬ್ಬದ ದಿನವೇ ಅಜಯ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಹೊರಹಾಕುವುದರ ಜೊತೆಗೆ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ.