ನವದೆಹಲಿ(ಫೆ:09): ಟೀಮ್ ಇಂಡಿಯಾದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮಾಜಿ ನಾಯಕ ಎಂ ಎಸ್ ಧೋನಿ ಪಾತ್ರ ಬಹು ಮುಖ್ಯವಾದುದು,ಹಾಗಾಗಿ ಈ ಬಾರಿ ವಿಶ್ವಕಪ್ ಗೆಲ್ಲಬೇಕಾದರೆ ತಂಡದಲ್ಲಿ ಧೋನಿ ಇರಲೇ ಬೇಕು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ .

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದರೂ ಸಹ ಮಾರ್ಗದರ್ಶನ,ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಧೋನಿ ಪಾತ್ರ ಮಹತ್ತರವಾದುದು ,ಧೋನಿಗೆ ಉತ್ತಮ ಕ್ರಿಕೆಟ್ ಜ್ಞಾನವಿದೆ,ಆ ಜ್ಞಾನವನ್ನು ಯಾವ ಸಮಯದಲ್ಲಿ ಬಳಸಬೇಕೆಂಬುದು ತಿಳಿದಿದೆ ಎಂದರು .

ಧೋನಿ ವಿರಾಟ್ ಹಾಗೂ ಇನ್ನಿತರೆ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ಮಾಡುತ್ತಾರೆ ಹಾಗಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಗೆಲುವು ಸಾಧಿಸಬೇಕಾದರೆ ತಂಡದಲ್ಲಿ ಧೋನಿ ಇರಲೇಬೇಕು ಎಂದು ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.