ನವದೆಹಲಿ(ಮಾ,06): ಕಿರುತೆರೆ ನಟಿ ಟೀನಾ ದತ್ತಾ ತಮ್ಮ ಸಹ ನಟ ಮೋಹಿತ್ ಮಲ್ಹೋತ್ರಾ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ

ದಯಾನ್ ಎಂಬ ಧಾರವಾಹಿನಲ್ಲಿ ಟೀನಾ ದತ್ತಾ, ಮತ್ತು ಮೊಹಿತ್ ಮಲ್ಹೋತ್ರಾ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ, ಸೆಟ್‍ನಲ್ಲಿ ಮೊಹಿತ್ ಅನುಚಿತವಾಗಿ ನನ್ನ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದರು. ನಾನು ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದೆ, ಆದರೂ ಸಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಯ ದೃಶ್ಯಕ್ಕಾಗಿ ಕ್ಲಿಕ್ ನಿಕ್ಸನ್ ಎಂಬ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸುವ ವೇಳೆ, ಮೋಹಿತ್ ನನ್ನ ಪಾತ್ರಕ್ಕೆ ಭಾರೀ ಬೇಡಿಕೆ ಇದೆ ಎಂದು ಹೇಳಿ ಅವರು ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಆ ಸಮಯದಲ್ಲಿ ಮಾಧ್ಯಮದವರು ಆ ಸ್ಥಳದಲ್ಲಿ ಇದ್ದರು. ಅವರು ಸಹ ಇದನ್ನು ನೋಡಿದ್ದಾರೆ. ನಾನು ಈ ಮೊದಲು ಅತ್ಯಾಚಾರ ದೃಶ್ಯಗಳು, ಪ್ರಣಯ ದೃಶ್ಯಗಳು ಹಾಗೂ ನಿಕಟ ದೃಶ್ಯಗಳನ್ನು ನಿರ್ವಹಿಸಿದ್ದೇನೆ ಆದರೆ ಯಾವತ್ತೂ ಸಹ ಈ ರೀತಿಯ ಕೆಟ್ಟ ಅನುಭವ ಆಗಿರಲಿಲ್ಲ ಎಂದಿರುವ ಟೀನಾ ಮೋಹಿತ್ ತುಂಬಾ ಕಿರಿಕಿರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸ್ವಲ್ಪ ಸಮಯದವರೆಗೆ ಈ ಕಿರುಕುಳವನ್ನು ನಾನು ತಡೆದುಕೊಂಡೆ. ಆದರೆ ಇದು ದೀರ್ಘಕಾಲವಾಗಿ ಮುಂದುವರಿಯುತ್ತಲೇ ಇದೆ. ನನಗೆ ಇನ್ನು ಮುಂದೆ ಇದನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಆದ್ದರಿಂದ ಈ ಬಗ್ಗೆ ನಿರ್ಮಾಕರಿಗೆ ದೂರು ನೀಡಿದ್ದೇನೆ ಎಂದು ಟೀನಾ ಹೇಳಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹಿತ್, ಟೀನಾ ಪಕ್ಕದಲ್ಲಿ ನಿಂತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಅವಳು ನನ್ನ ಒಳ್ಳೆಯ ಸ್ನೇಹಿತೆ ಮತ್ತು ನಾವು ಸೌಹಾರ್ದ ಸಂಬಂಧವನ್ನು ಹೊಂದಿದ್ದೇವೆ ಎಂದು ಹೇಳೆದ್ದಾರೆ.

ದಯಾನ್ ದಾರವಾಹಿಯಲ್ಲಿ ಟೀನಾ ಉತ್ತರಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.