ಚೆನ್ನೈ:(ಫೆ13): ಟಿಕ್‍ಟಾಕ್ ಆ್ಯಪ್‍ನನ್ನು ತಮಿಳುನಾಡು ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಟಿಕ್‍ಟಾಕ್ ಬಳಸಿ ವೀಡಿಯೊ ಮಾಡುವ ಯುವತಿಯರ ಹಾಗೂ ಮಹಿಳೆಯ ಫೋಟೋವನ್ನು ಕೆಟ್ಟದ್ದಾಗಿ ಎಡಿಟ್ ಮಾಡುವ ಗುಂಪೊಂದನ್ನು ಈಗಾಗಲೇ ತಮಿಳುನಾಡಿನ ಪೊಲೀಸರು ಶೋಧಿಸಿದ್ದಾರೆ.

ಈಗಾ ಟಿಕ್‍ಟಾಕ್ ಆ್ಯಪ್‍ನನ್ನು ನಿಷೇಧ ಮಾಡುವ ಆದೇಶ ಹೊರಡಿಸಿದ್ದು, ಇದು ಇತ್ತೀಚಿನ ದಿನಗಳಲ್ಲಿ ಯುವತಿಯರು ಹಾಗೂ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ.

ತಮಿಳುನಾಡಿನ ಮಣಿತನೇಯ ಜನನಾಯಕ ಕಚ್ಚಿ(MJK) ಪಕ್ಷದ ನಾಯಕರಾದ ತಮೀಮುನ್ ಅನ್ಸಾರಿ ಈ ಆ್ಯಪ್‍ನನ್ನು ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು, ಈ ವಿಚಾರವಾಗಿ ಸಚಿವ ಎಂ. ಮಣಿಕಂಠನ್ ವಿಧಾನಸಭಾ ಕಲಾಪದಲ್ಲಿಯೂ ಪ್ರಸ್ತಾಪಿಸಲಾಗಿದೆ. ಇನ್ನೂ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವರಾದ ಎಂ. ಮಣಿಕಂಠನ್ ಕೂಡ ಈ ಆ್ಯಪ್‍ನನ್ನು ಬ್ಯಾನ್ ಮಾಡುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ ವೀಡಿಯೊ ಮಾಡುವುದು ಟ್ರೆಂಡಾಗಿ ಬಿಟ್ಟಿದ್ದು, ಈ ಆ್ಯಪ್‍ಗೆ ಯುವಕ, ಯುವತಿಯರಂತು ಹೆಚ್ಚು ಮಾರು ಹೋಗಿದ್ದಾರೆ.