ಬೆಂಗಳೂರು(ಮೇ:21): ಬೆಂಗಳೂರಿನಲ್ಲಿ ಮೂರು ಕಡೆ ಕೌಂಟಿಂಗ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಸಲಾಗುವುದು. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆಯನ್ನು ನಡೆಸಲಾಗುವುದು.

ಎಸ್ ಎಸ್ ಎಂ ಆರ್ ಐ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ವೇಳೆ ಮಾಧ್ಯಮದವರನ್ನು ಹೊರತು ಪಡಿಸಿ ಯಾರೂ ಸಹ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ, ಮತ ಎಣಿಕೆಯನ್ನು ಮದ್ಯಾಹ್ನ 12 ಗಂಟೆ ವೇಳೆಗೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ 1500 ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಬಂದೋಬಸ್ತ್ ಗಾಗಿ 07 ಡಿಸಿಪಿ, 22 ಎಸಿಪಿ, 77 ಇನ್ಸ್ಪೆಕ್ಟರ್ಸ್, 180 ಪಿಎಸ್ಐ, 2000 ಪೇದೆಗಳು, 23 ಕೆ ಎಸ್ ಆರ್ ಪಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ, ಐ ಡಿ ಇರುವವರು ಮಾತ್ರ ಮತ ಎಣಿಕೆಯ ಕೇಂದ್ರದ 100 ಮೀ. ಹೊರಗೆ ಸಂಭ್ರಮಾಚರಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.