ಬೆಂಗಳೂರು:(ಜ12): ಮಾಜಿ ಸಚಿವರಾದ ಜನಾರ್ಧನ ರೆಡ್ಡಿ ಎಲ್ಲರಿಗೂ ಅಚ್ಚರಿಯಾಗುವ ಫೇಸ್‍ಬುಕ್ ಪೋಸ್ಟರ್ ಒಂದನ್ನು ಹಾಕಿ, 2019 ರಲ್ಲಿ ನನ್ನ ಬದುಕಿನ ಹೊಸ ಅಧ್ಯಾಯನ ಬರೆಯಲು ಹೊರಟ್ಟಿದ್ದೇನೆಂದು ಹೇಳಿದ್ದಾರೆ.

ನಿನ್ನೆ ಅವರು 52 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಅವರ ತಾಯಿ ಸ್ವರ್ಗಸ್ಥರಾದ ದಿನದಿಂದ ಅವರು ಬಹಿರಂಗವಾಗಿ ಜನ್ಮದಿನವನ್ನು ಆಚರಿಸಿಕೊಳ್ಳದೆ, ದೇವರ ಪೂಜೆ, ಧ್ಯಾನ ಮಾಡುವುದರ ಜೊತೆಗೆ ಸಮಾಜದ ಸಮಸ್ತ ಜನರ ಹಿತಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡಿದ್ದೇನೆ ಎಂದಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಮುಂಚೂಣಿಗೆ ಬಂದು ಮತ್ತೆ ನಿಮ್ಮೆಲ್ಲರ ಸೇವೆ ಮಾಡಲು ಮುಂದಾಗಿದ್ದೇನೆ. ನಾನು ಮಾನಸಿಕವಾಗಿ ಸಿದ್ಧನಿದ್ದು, ಈ ಬಾರೀ ನನ್ನ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಬೇಕು ಎಂದು ಬಯಸಿದ್ದೇನೆಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಫೇಸ್‍ಬುಕ್ ಪೋಸ್ಟರ್‍ನಲ್ಲಿ ಹಾಕಿಕೊಂಡಿದ್ದಾರೆ.