ಬೆಂಗಳೂರು(ಆಗಸ್ಟ್.17) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡಲು ಹೆದರುತ್ತಾರೆ. ಇಷ್ಟೊಂದು ಲಜ್ಜೆಗೆಟ್ಟ ಸರ್ಕಾರವನ್ನು ನಾನು ಎಂದು ನೋಡಿಲ್ಲ. ಸರ್ಕಾರ ಎನ್ನುವುದು ಏನಾದರು ರಾಜ್ಯದಲ್ಲಿ ಇದ್ದಾರೆ, ಕೂಡಲೇ ಅಧಿವೇಶವನ್ನು ಕರೆದು, ನೆರೆ, ಪ್ರವಾಹ, ಬರದ ಬಗ್ಗೆ ಚರ್ಚೆಯನ್ನು ಮಾಡಲಿ, ಇದೊಂದು ಕೆಟ್ಟ, ಅನೈತಿಕ, ಅಕ್ರಮವಾದ ಸರ್ಕಾರ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ 4 ಕೋಟಿ ಜನರಿಗೆ 7 ಕೆ.ಜಿ ಅಕ್ಕಿಯನ್ನು ಕೊಟ್ಟಿದ್ದೇವೆ. ಆದರೆ ಬಿಜೆಪಿ ಸರ್ಕಾರ 7 ಕೆ.ಜಿ ಅಕ್ಕಿಯನ್ನು ಕಡಿಮೆ ಮಾಡುವ ಚರ್ಚೆಯನ್ನು ನಡೆಸುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಬಿಜೆಪಿ ಹೀಗೆ ಮಾಡಿದ್ದೆ ಆದಲ್ಲಿ ಕಾಂಗ್ರೆಸ್ ಪಕ್ಷ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕಡಿಮೆ ಅಕ್ಕಿ ವಿತರಣೆ ಮಾಡುವುದರಿಂದ ಉಳಿದ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ನೀಡುವ ಮಾತು ಕೇಳಿ ಬರುತ್ತಿದೆ. ರೈತರಿಗೆ ಹೆಚ್ಚು ಹಣ ನೀಡಿ ಅದಕ್ಕೆ ನಮ್ಮ ಯಾವ ತಕರಾರಿಲ್ಲ. ಆದರೆ ಬಡವರ ಅಕ್ಕಿಯನ್ನು ಕಡಿಮೆ ಮಾಡುವುದು ಸರಿಯಲ್ಲ. ಒಂದು ವೇಳೆ ಮಾಡಿದ್ದೆ ಆದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಪ್ರತಿಭಟನೆ ಮಾಡುವುದು ಖಚಿತ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.