ತಿರುಪತಿ(ಜುಲೈ.17) ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂದು ಮಂಡಿಯಲ್ಲಿ ಯುವಕನೊಬ್ಬ ತಿರುಪತಿ ಬೆಟ್ಟವನ್ನು ಹತ್ತಿ ದೇವರಲ್ಲಿ ಹರಕೆ ತೀರಿಸಿದ್ದಾನೆ.

ಬಾಗಲಕೋಟೆಯ ವಿದ್ಯಾಗಿರಿ‌ ಎಂಬ ಗ್ರಾಮದ ನಿವಾಸಿಯಾಗಿರುವ ಮಹಾಂತೇಶ ಷಹಾಪುರ ಅವರು ತಿರುಪತಿಯಲ್ಲಿ ಬೆಟ್ಟದ ಮೆಟ್ಟಿಲುಗಳನ್ನು ಮಂಡಿಯೂರಿ ಹತ್ತಿದ್ದಾನೆ. ಇದಲ್ಲದೇ ಕಲಬುರಗಿಯಲ್ಲಿಯೂ ಕೂಡ ಬಿಎಸ್‍ ಯಡಿಯೂರಪ್ಪ ಮತ್ತೆ ಸಿಎಂ ಆಗಲಿ ಎಂದು ವಿಶೇಷ ಪೂಜೆ ಮಾಡಲಾಗಿದೆ.

ಸ್ವಾಭಿಮಾನಿ ಲಿಂಗಾಯತ ಬಳಗದ ವತಿಯಿಂದ ನಗರದ ವಿದ್ಯಾನಗರ ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಅಭಿಷೇಕ, ಪೂಜೆಯನ್ನು ಸಲ್ಲಿಸಿದ್ದಾರೆ. ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಮ್‍ಎಸ್ ಪಾಟೀಲ್ ನೇತೃತ್ವದಲ್ಲಿ ಈ ಪೂಜೆ ಸಲ್ಲಿಸಿ, ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.