ಶಮರಿಮಲೆ:(ಡಿ19): ಶಬರಿ ಮಲೆಗೆ ತೃತೀಯ ಲಿಂಗಿಗಳು ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

ನಿನ್ನೆ ಬಿಗಿ ಪೋಲಿಸ್ ಭದ್ರತೆಯೊಂದಿಗೆ ಕಪ್ಪು ಸೀರೆ ಉಟ್ಟು, ಇರುಮುಡಿ ಹೊತ್ತು ತೃತೀಯ ಲಿಂಗಿಗಳಾದ ಅನನ್ಯ, ತೃಪ್ತಿ, ಅವಂತಿಕ, ರೆಂಜುಮೊಲ್ ದೇವಸ್ಥಾನವನ್ನು ಪ್ರವೇಶಿಸಿದ್ದಾರೆ.

ಪ್ರವೇಶಿಸುವುದಕ್ಕೂ ಮೊದಲು ಕೇರಳದ ಹೈಕೋರ್ಟ್‍ನ ನಿಯೋಜಿತ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಡಿಜಿಪಿ ಎ. ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಭೇಟಿ ಮಾಡಿದ ನಂತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ನಾಲ್ಕು ಜನ ತೃತೀಯ ಲಿಂಗಿಗಳು ಶಬರಿಮಲೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿರುವುದು ತಮಗೆ ಸಂತೋಷತಂದಿದೆ ಎಂದಿದ್ದಾರೆ.