ಶಿವಮೊಗ್ಗ(ಆ:19): ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಂದಿ ಮನೆಗಳ್ಳರನ್ನು ಬಂಧಿಸಿದ್ದು, ಇವರಿಂದ ಸುಮಾರು 24.79 ಲಕ್ಷ ರೂ.ಗಳ ಮೊತ್ತದಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು, ದೊಡ್ಡಪೇಟೆ ಹಾಗೂ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನದ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ, ಆರು ಕಳ್ಳರನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದು, ಇವರಿಂದ ಒಟ್ಟು 24.79 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಇನ್ನು, ಬಂಧಿತ ಕಳ್ಳರುಗಳಾದ ಶಿವಮೊಗ್ಗದ ಕ್ಲಾರ್ಕ್ ಪೇಟೆಯ ಅಬ್ದುಲ್ ರೋಷನ್ ಬೊಮ್ಮನಕಟ್ಟೆಯ ಕೆ.ಸಿ. ಪ್ರಕಾಶ್, ಸೈಫುಲ್ಲಾ ಖಾನ್, ಆಜಾದ್ ನಗರದ ಮೊಹಮದ್ ಇಬ್ರಾಹಿಂ, ಚೀಲೂರು ಗ್ರಾಮದ ಇಲಿಯಾಸ್, ಹಾಸನ ಜಿಲ್ಲೆಯ ರಾಜಘಟ್ಟದ ವಿಜಿಕುಮಾರ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.