ಬೆಂಗಳೂರು(ಜೂನ್.14) ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಆನಂದರಾವ್ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ 2 ದಿನಗಳ ಅಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದಾರೆ.

ಈ ಪ್ರತಿಭಟನೆಯಲ್ಲಿ ಕೆ.ಎಸ್.ಈಶ್ವರಪ್ಪನವರು ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ್ದು, ಈ ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮೀಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಾಟ ಮಾಡಿಬಿಡುತ್ತಾರೆ. ಜಮೀರ್, ರೋಷನ್ ಬೇಗ್ ಇಬ್ಬರು ಮೈತ್ರಿ ಪಕ್ಷದ ಕಳ್ಳೆತ್ತುಗಳು. ಇನ್ನೊಂದು ವಾರಕ್ಕೆ ಈ ಸರ್ಕಾರ ಬೀಳುತ್ತೆ, ಇಬ್ಬರು ಪಕ್ಷೇತರ ಶಾಸಕರು ಮುಂದೆ ಬಿಜೆಪಿಗೆ ಬರಲಿದ್ದಾರೆ. ಪಕ್ಷೇತರರು ಹೆಚ್ಚು ದಿನ ಸಚಿವರಾಗಿ ಇರಲ್ಲ ಎಂದು ಪ್ರತಿಭಟನೆಯ ವೇಳೆ ನುಡಿದಿದ್ದಾರೆ.