ಥೆರೇಸಾ ಮೇ ಸರ್ಕಾರಕ್ಕೆ ಅತೀ ದೊಡ್ಡ ಸೋಲು

ಲಂಡನ್(ಜ:16): ಬಿಕ್ಸಿಟ್ ವಿಷಯದಲ್ಲಿ ಪ್ರಧಾನ ಮಂತ್ರಿ ಥೆರೇಸಾ ಮೇ ನೇತೃತ್ವದ ಬ್ರಿಟನ್ ಸರ್ಕಾರಕ್ಕೆ ಇತಿಹಾಸದಲ್ಲಿ ಎಂದೂ ಆಗದ ಅತಿ ದೊಡ್ಡ ಸೋಲು ಉಂಟಾಗಿದೆ.ಬಿಕ್ಸಿಟ್ ವಿಚ್ಛೇದನ ಪಡೆಯುವ ಥೆರೇಸಾ ಅವರ ಯತ್ನವನ್ನು ಸಂಸತ್ತಿನ ಸದಸ್ಯರು ತಳ್ಳಿಹಾಕಿದ್ದಾರೆ.

ಈ ಪರಾಭಾವದೊಂದಿಗೆ ಥೆರೇಸಾ ಅವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಿದೆ ಅಷ್ಟೇ ಅಲ್ಲದೇ ಈ ಸೋಲು ಸರ್ಕಾರ ಮತ್ತು ಬಿಕ್ಸಿಟ್ ಗಾಗಿ ರೂಪಿಸಿದ್ದ ಯೋಜನೆ ಬಿಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಸಂಸತ್ತಿನಲ್ಲಿನ 432 ಮತಗಳಲ್ಲಿ ಬಿಕ್ಸಿಟ್ ವಿರುದ್ಧ 230 ಮತಗಳು ಚಲಾವಣೆಯಾದವು,ಇದು ಬ್ರಿಟನ್ ರಾಜಕೀಯ ಚರೀತ್ರೆಯಲ್ಲೇ ಬ್ರಿಟನ್ ಪ್ರಧಾನಿಯೊಬ್ಬರಿಗಾದ ಅತ್ಯಂತ ದೊಡ್ಡ ಸೋಲು ಎನ್ನಲಾಗಿದೆ.