ಚಿಕ್ಕಮಗಳೂರು(ಮಾ:18): ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ಪರ್ಧೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶೃಂಗೇರಿಯ ಮೆಣಸೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿನಿಮಾದವರೆಲ್ಲಾ ರಾಜ್ಯದ ಜನತೆಯ ಮುಂದೆ ಬಂದಿದ್ದಾರೆ,ಬರಲಿ ಬಿಡಿ ಎಂದಿದ್ದಾರೆ.

ಚುನಾವಣೆಯ ಯುದ್ಧ ಗೆಲ್ಲಲು ಶಾರದಾಂಬೆಯ ಆಶೀರ್ವಾದ ಬೇಕು ,ನಾನು ಕೇವಲ ನಿಖಿಲ್ ಒಬ್ಬನಿಗಾಗಿ ಸನ್ನಿದಿಗೆ ಬಂದಿಲ್ಲ 28 ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದಿದ್ದಾರೆ.

ಇದೇವೇಳೆ ಸುಮಲತಾ ಅಂಬರೀಷ್ ಸ್ಪರ್ಧೆಯ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ,ಸುಮಲತಾ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.