ಬೆಂಗಳೂರು:(ಜ16): ಪುನೀತ್ ರಾಜ್‍ಕುಮಾರ್ ನಟನೆಯ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ.

ಪವನ್ ಒಡೆಯರ್ ನಿರ್ದೇಶನದ, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟ ಸಾರ್ವಭೌಮ ಚಿತ್ರ ಬಾಕ್ಸ್ ಆಫಿಸ್‍ನಲ್ಲಿ ಮತ್ತೊಂದು ಹವಾ ಮಾಡಲು ಹೊರಟಿದೆ.

ಪುನೀತ್ ರಾಜ್‍ಕುಮಾರ್ ಈ ಸಿನಿಮಾದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಡಿಂಪಲ್ ಕ್ವೀನ್ ರಚಿತಾ ಹಾಗೂ ಅನುಪಮ ಪರಮೇಶ್ವರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಡಿ ಇಮ್ಮಾನ್ ಸಂಗೀತ ಸಂಯೋಜಿಸಿದ್ದು, ವೈದೈರವರ ಛಾಯಾಗ್ರಹಣವಿದೆ. ರವಿಶಂಕರ್, ಚಿಕ್ಕಣ್ಣ, ಪ್ರಭಾಕರ್, ಸರೋಜ ದೇವಿ, ಈ ಸಿನಿಮಾದಲ್ಲಿ ನಟಿಸಿದ್ದಾರೆ.