ಬೆಂಗಳೂರು:(ಫೆ21): ನಟಿ ಮಾನ್ವಿತಾ ಹರೀಶ್ ಅಭಿನಯಿಸುವ ದ್ವಿಭಾಷಾ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಅದೇನಪ್ಪ ಅಂದ್ರೆ “ರಾಜಸ್ಥಾನ ಡೈರಿಸ್” ಎಂಬ ಟೈಟಲ್ ಅನ್ನು ಇಡಲಾಗಿದೆ.

ಈ ಚಿತ್ರವನ್ನು ನಂದಿತಾ ಯಾದವ್ ನಿರ್ದೇಶನ ಮಾಡುತ್ತಿದ್ದು, ಎರಡು ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆಯಂತೆ. ಅಂದರೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಚಿತ್ರ ಮೂಡಿಬರಲಿದೆ.

ಈ ಚಿತ್ರದಲ್ಲಿ ನಟ ಸುಮುಖ್ ಅವರು ನಾಯಕನಾಗಿ ನಟಿಸಲ್ಲಿದ್ದಾರೆ. ಇನ್ನು ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭವಾಗಲ್ಲಿದ್ದು, ಮುಂಬೈ, ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ.

ಈಗಾ ಟಗರು ನಟಿ ಮಾನ್ವಿತಾ ಬೇರೊಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇನ್ನೇನು ಈ ಹೊಸ ಸಿನಿಮಾದ ಶೂಟಿಂಗ್ ಸದ್ಯದರಲ್ಲಿಯೇ ಆರಂಭವಾಗುತ್ತಿರುವುದರಿಂದ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲ್ಲಿದ್ದಾರೆ.