ಕೋಲಾರ(ಜುಲೈ.13) ಟಿಕ್ ಟಾಕ್ ವಿಡಿಯೋ ಎಲ್ಲೆಡೆ ವಿಡಿಯೋ ಭೂತ ವ್ಯಾಪಿಸಿದ್ದು ಟಿಕ್ ಟಾಕ್ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಟಿಕ್ ಟಾಕ್ ಎನ್ನುವುದು ಕೇವಲ ಮನೋರಂಜನೆ ಮಾತ್ರವಾಗಿರದೆ ಯುವಜನತೆಯ ಮನಸ್ಸಿನ ಜೊತೆ ಚೆಲ್ಲಾಟವಾಡುತ್ತಿದೆ. ಬ್ಲೂವೇಲ್‌ನಂತೆ ಇದೀಗ ಟಿಕ್ ಟಾಕ್ ಭೂತ ಎಳೆ ವಯಸ್ಸಿನ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ.

ಟಿಕ್ ಟಾಕ್ ವಿಡಿಯೋ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ಉಸಿರುಗಟ್ಟಿ ವಿದ್ಯಾರ್ಥಿನಿ ಮಾಲಾ ಮೃತಪಟ್ಟಿದ್ದಾರೆ. ಈ ಘಟನೆ ಕೋಲಾರದ ವಡಗೇರಹಳ್ಳಿಯಲ್ಲಿ ನಡೆದಿದ್ದು, ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.