ಬೆಂಗಳೂರು:(ಜೂನ್07): ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳು ನಾವೇ ನಿರ್ವಹಿಸುತ್ತೇವೆ ಎಂದರೆ ಒಪ್ಪಿಗೆ ನೀಡಲಾಗುವುದು ಇಲ್ಲದಿದ್ದರೆ ಹೊರಗುತ್ತಿಗೆಗೆ ನೀಡಲು ರಾಜ್ಯ ಸಚಿವ ಸಂಪುಟವು ತೀರ್ಮಾನಿಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಬೈರೇಗೌಡ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ತೀರ್ಮಾನಿಸಲಾಗಿದ್ದು, 16 ಸಾವಿರ ಅಳವಡಿಕೆಯಾಗಿದ್ದು, ಇವುಗಳ ನಿರ್ವಹಣೆ ಸವಾಲಾಗಿದೆ.

ಇದರಿಂದ ತಾಲೂಕು ಮಟ್ಟದಲ್ಲಿ ಪ್ಯಾಕೇಜ್ ಮಾಡಿ, ಒಂದು ಸಂಸ್ಥೆಗೆ ಹೊರಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಐದು ವರ್ಷ ಘಟಕ ಕಾರ್ಯನಿರ್ವಹಿಸುವಂತೆ ಮಾಡಲು ಸರ್ಕಾರ 233 ಕೋಟಿ ರೂ ವೆಚ್ಚ ಭರಿಸಲಿದ್ದು, ಪ್ರತಿ ಘಟಕಕ್ಕೆ ನಿರ್ವಹಣೆಯ ವೆಚ್ಚ 3000 ರೂ ನಂತೆ ನೀಡಲಾಗುವುದು ಎಂದಿದ್ದಾರೆ.