ಮುಂಬೈ:(ಸೆ.20): ಮುಂಬೈನ ಪೊವಾಯಿಯಿಂದ ಮೀರಾರೋಡ್ ವರೆಗೆ ಪಶ್ಚಿಮ ಹಾಗೂ ಪೂರ್ವ ಉಪನಗರದಲ್ಲಿ ನೆನ್ನೆ ಅನಿಲ ಸೋರಿಕೆಯಿಂದಾಗಿ ಅಲ್ಲಿನ ನಿವಾಸಿಗಳಲ್ಲಿ ಕೆಲ ಸಮಯ ಆತಂಕ ಮನೆ ಮಾಡಿತ್ತು. ಸುಮಾರು 30ರಿಂದ 40 ನಿಮಿಷಗಳ ನಂತರ ಆ ಅನಿಲದ ವಾಸನೆಯು ಕಡಿಮೆಯಾಗಿದ್ದರಿಂದ ಜನರಲ್ಲಿದ್ದ ಆತಂಕ ಕಡಿಮೆಯಾಯಿತು.

ಮುಂಬೈ ಪೊಲೀಸರು ಪೊವಾಯ್, ಚೆಂಬೂರ್, ಚಕಾಲ, ಗೋರೆಗಾಂವ್ನಿಂದ ಮೀರಾರೋಡ್ನ ತನಕ ದೂರುಗಳನ್ನು ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಿಲ ಸೋರಿಕೆಯ ಸುದ್ದಿ ವ್ಯಾಪಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ಘಟಕ, ಅನಿಲ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಆರಂಭಿಸಿತು. ರಾಷ್ಟ್ರೀಯ ರಾಸಾಯನಿಕ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್ ಆಗಿದೆ ಎಂಬ ವದಂತಿ ಹಬ್ಬಿತ್ತು.

ಟ್ರಾಂಬೆ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ, ಆರ್ಸಿಎಫ್ನಲ್ಲಿ ಯಾವುದೇ ಸೋರಿಕೆಯ ಮಾಹಿತಿ ಲಭಿಸಿರಲಿಲ್ಲ. ಮಹಾನಗರ ಗ್ಯಾಸ್ ಲಿಮಿಟೆಡ್ ಕೂಡ ತನ್ನ ಯಾವುದೆ ಪೈಪ್ಗಳಲ್ಲಿ ಸೋರಿಕೆಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ.
ಇಡೀ ಪ್ರದೇಶ ಗ್ಯಾಸ್ ಲೀಕ್ನಂತಹ ವಾಸನೆಯಿಂದ ಕೂಡಿತ್ತು ಎಂದು ವಿಲೇಪಾರ್ಲೆಯ ನಿವಾಸಿ ರಾಧಿಕಾ ಶರ್ಮಾ ಟ್ವೀಟ್ ಮಾಡಿದ್ದರು.