ನವದೆಹಲಿ:(ಜ29): ಇಂದು ಕಾರ್ಮಿಕರ ನಾಯಕನನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇವೆ. ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ವ್ಯಕ್ತಿ ಇವರು. ಪ್ರಮಾಣಿಕ ರಾಜಕೀಯ ನಾಯಕ, ಅಪ್ರತಿಮ ದೇಶ ಭಕ್ತ, ಸಾಮಾಜಿಕ ಹೋರಾಟಗಾರ, ಕಾರ್ಮಿಕರ ಮುಖಂಡರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರು ಜೂನ್ 03 1930 ಮಂಗಳೂರಿನ ಜೊಸೇಫ್ ಫರ್ನಾಂಡಿಸ್ ಮತ್ತು ಅಲಿಸ್ ಮಾರ್ಥಾ ಫರ್ನಾಂಡಿಸ್ ಅವರ ಮಗನಾಗಿ ಸಂಪ್ರದಾಯ ಉಳ್ಳ ಕುಟುಂಬದಲ್ಲಿ ಜನಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವದ ಜೊತೆಗೆ ದಿಟ್ಟತನದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಇವರು 18 ನೇ ವಯಸ್ಸಿನಲ್ಲಿ ಚರ್ಚ್‍ನನ್ನು ಬಿಟ್ಟು ಉದ್ಯೋಗ ಹುಡುಕಿಕೊಂಡು ಬಾಂಬೆಗೆ ತೆರಳಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಬಹು ಭಾಷೆಯ ಜ್ಞಾನವನ್ನು ಹೊಂದಿದ್ದರು.

ಇವರ ಸಾಧನೆ ಅಪಾರ 1967 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಕರ್ತವ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಇವರ ದಿಟ್ಟತನದ ಪಾತ್ರ ನಿಜಕ್ಕೂ ಮೆಚ್ಚಲೆ ಬೇಕು. 1998 ರಲ್ಲಿ ಎನ್‍ಡಿಎ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದರು.

2009 ರಿಂದ ಜುಲೈ 2010 ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಪತ್ರಿಕಾ ರಂಗದಲ್ಲಿಯೂ ಇವರ ಸೇವೆ ಅಪಾರ. ಕೇವಲ ಒಂದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸದೆ ಸಾಮಾಜಿಕವಾಗಿ, ರಾಜಕೀಯವಾಗಿ, ಕೃಷಿ, ಕೈಗಾರಿಕಾ, ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ.