ಬೆಂಗಳೂರು(ಮಾ:18): ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಜರುಗಲಿರುವ ಕ್ಷೇತ್ರಗಳ ಚುನಾವಣೆಗೆ ಅಧಿಸೂಚನೆ ಮಾರ್ಚ್ 19ರಂದು ಪ್ರಕಟವಾಗಲಿದ್ದು,ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಟಿಕೆಟ್ ಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ.

ಆಡಳಿತಾರೂಢ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಗೊಂದಲ ಹಾಗೂ ಅಸಮಾಧಾನ ಮಧ್ಯೆ ಲೋಕಸಭಾ ಚುನಾವಣೆಗೆ ಸಿದ್ಧತೆ ಬಿರುಸಿನಿಂದ ಸಾಗಿದೆ. ಮೊದಲ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳ ಚುನಾವಣೆಗೆ ಮಾರ್ಚ್ 19ರಂದು ಅಧಿಸೂಚನೆ ಹೊರಡಿಸಲಿದ್ದು, ಏ.18ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಗೆ ಮಾರ್ಚ್ 28ರಂದು ಅಧಿಸೂಚನೆ ಹೊರಡಿಸಲಿದ್ದು ಏ.23ರಂದು ಮತದಾನ ನಡೆಯಲಿದೆ.ಮೊದಲನೇ ಹಂತದ ಚುನಾವಣೆ ಉಡುಪಿ,ಚಿಕ್ಕಮಗಳೂರು,ಹಾಸನ,ದಕ್ಷಿಣಕನ್ನಡ,ಚಿತ್ರದುರ್ಗ,ತುಮಕೂರು,ಮಂಡ್ಯ,ಮೈಸೂರು,ಚಾಮರಾಜನಗರ,ಬೆಂಗಳೂರು ಗ್ರಾಮಾಂತರ,ಬೆಂಗಳೂರು ಉತ್ತರ,ಬೆಂಗಳೂರು ಕೇಂದ್ರ,ಬೆಂಗಳೂರು ದಕ್ಷಿಣ,ಚಿಕ್ಕಬಳ್ಳಾಪುರ,ಕೋಲಾರದಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ.

ಇನ್ನು ಎರಡನೇ ಹಂತದ ಚುನಾವಣೆ ಚಿಕ್ಕೋಡಿ,ಬೆಳಗಾವಿ,ಬಾಗಲಕೋಟೆ,ವಿಜಯಪುರ,ಕಲಬುರ್ಗಿ,ರಾಯಚೂರು,ಬೀದರ್,ಕೊಪ್ಪಳ,ಬಳ್ಳಾರಿ,ಹಾವೇರಿ,ಧಾರವಾಡ,ಉತ್ತರಕನ್ನಡ,ದಾವಣಗೆರೆ,ಶಿವಮೊಗ್ಗದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.