ಜೈಪುರ:(ಫೆ21): ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ಯುವಕನೊಬ್ಬನು ಟ್ಯಾಟೂ ಹಾಕಿಸಿಕೊಂಡು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ಬಿಕಾನೇರ್ ಭಗತ್ ಸಿಂಗ್ ಯೂತ್ ಬ್ರಿಗೇಡ್‍ನ ಸದಸ್ಯನಾದ ಗೋಪಾಲ್ ಸಹರಣ್ ಎಂಬ ಯುವಕ ಹುತಾತ್ಮ ಯೋಧರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗೋಪಾಲ್ ಸಹರಣ್ ಅವರು ಹಾಕಿಸಿಕೊಂಡ ಟ್ಯಾಟೂದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಹಾಗೂ ಇನ್ನು ಇತರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ಬಿಟ್ಟ ಒಟ್ಟು 71 ಹುತಾತ್ಮ ಯೋಧರ ಹೆಸರು ಟ್ಯಾಟೂದಲ್ಲಿದೆ.

ತಮ್ಮ ಬೆನ್ನ ಮೇಲೆ 71 ಯೋಧರ ಹೆಸರು ಸಾಲಾಗಿ ಟ್ಯಾಟೋ ಹಾಕಿಸಿಕೊಂಡಿದ್ದು, ಈ ಮೂಲಕ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.

ಇನ್ನು ಭಾರತಾಂಬೆಯ ಧ್ವಜವನ್ನು ಕೂಡ ಅವರು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ದೇಶಕ್ಕೆ ಹಾಗೂ ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.