ಮಂಡ್ಯ:(ಫೆ09): ರೆಬೆಲ್‍ಸ್ಟಾರ್ ಅಂಬರೀಶ್ ಹೆಸರು ಸೊಂಪಾಗಿ ಬೆಳೆದ ಭತ್ತದ ಪೈರಿನಲ್ಲಿ ಮೂಡಿಬಂದಿದೆ. ಹೃದಯಾಕಾರದಲ್ಲಿ ಭತ್ತದ ಬೀಜ ಬಿತ್ತುವುದರ ಮೂಲಕ ಅದರ ಮದ್ಯೆ “ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ” ಎಂಬ ಹೃದಯಾಳದ ಮಾತು ಭತ್ತದ ಬೀಜದ ಮೂಲಕ ಮೊಳಕೆ ಒಡೆದು ನಿಂತಿದೆ.

ಅಂಬಿ ಅಗಲಿ ಕೆಲವು ತಿಂಗಳುಗಳು ಕಳೆದರು ಮಂಡ್ಯದ ಜನರ ದುಃಖ ಮಾತ್ರ ಇನ್ನು ಮರೆಯಾಗಿಲ್ಲ ಎಂಬುದು ತೋರುತ್ತದೆ. ಮಂಡ್ಯದ ಮೊತ್ತಹಳ್ಳಿ ಗ್ರಾಮದ ರಾಜು ಕಾಳಪ್ಪ, ಎಂ.ಜೆ. ದಿಲೀಪ್ ಕುಮಾರ್, ಎಂ.ಪಿ. ಹರ್ಷಿತ್, ಸಹೋದರರ ಗದ್ದೆಯಲ್ಲಿ “ಮತ್ತೆ ಹುಟ್ಟಿ ಬಾ ಅಂಬರೀಶ್ ಅಣ್ಣ” ಎಂಬ ಮನದಾಳದ ದುಃಖದ ಮಾತು ಭೂಮಿತಾಯಿಯ ಒಡಳಿಂದ ಮೂಡಿಬಂದಿದೆ.

ಈ ಫೋಟೋವನ್ನು ಅಂಬರೀಶ್ ಪತ್ನಿ ಸುಮಲತಾ ಟ್ವಿಟರ್‍ನಲ್ಲಿ ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ಸಂತೋಷ ವ್ಯಕ್ತಪಡಿಸುವುದರ ಮೂಲಕ ಫೋಟೋವನ್ನು ಟ್ವಿಟರ್‍ನಲ್ಲಿ ಹಾಕಿದ್ದಾರೆ. “ಇದೇ ಶಾಶ್ವತ ಪ್ರೇಮ ಎಂಬುವುದರ ಮೂಲಕ ಅಭಿಮಾನಿಗಳ ಅಭಿಮಾನಕ್ಕೆ ಮನಸೋತಿದ್ದಾರೆ. ಇನ್ನು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.