ಭೋಪಾಲ್(ಜ:29): ಕಳೆದ ವಾರ ಸಂಭವಿಸಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು,ಕೊಲೆಯಾದವನೇ ಕೊಲೆಗಾರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ ಕೊಲೆಯಾಗಿದ್ದೇ ಬೇರೆ,36 ವರ್ಷದ ಆರ್ ಎಸ್ ಎಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ಇನ್ಷೂರೆನ್ಸ್ ಹಣಕ್ಕಾಗಿ ಆತ ಸೃಷ್ಟಿಸಿದ ಮಹಾ ನಾಟಕ ಅದಾಗಿತ್ತು.

ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ ಎಂಬಾತನನ್ನು ಹತ್ಯೆಮಾಡಿ,ಆ ಶವನನ್ನು ತನ್ನದೆಂದು ಬಿಂಬಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ,ತನಿಖೆಯವೇಳೆ ಶವದ ಡಿಎನ್ಎ ಪರೀಕ್ಷೆ ನಡೆಸಿದ್ದ ಪೊಲೀಸರಿಗೆ ಈ ಮಾಹಿತಿ ದೊರೆತಿದ್ದು,ಪ್ರಸ್ತುತ ಹಿಮ್ಮತ್ ಪಾಟೀದಾರ್ ನ ಶೋಧ ಕಾರ್ಯ ಮುಂದುವರೆದಿದೆ.