ಲಂಡನ್(ಜ.16): ಬ್ರಿಟನ್ ಪ್ರಧಾನಿ ಥೆರಾಸಾ ಮೇ ಅವರಿಗೆ ಬಹು ದೊಡ್ಡ ಸೋಲು ಎದುರಾಗಿದೆ. ಯುರೋಪಿಯನ್ ಒಕ್ಕೂಟ ತೊರೆಯುವ ಬಹುವಿವಾದಿತ ಬ್ರೆಕ್ಸಿಟ್ ಒಪ್ಪಂದವನ್ನು ಇಂಗ್ಲೆಂಡ್ ಸಂಸತ್ತು ತಿರಸ್ಕರಿಸಿದೆ.

ಇದು ಥೆರಾಸಾ ಅವರಿಗೆ ಬಹುದೊಡ್ಡ ವೈಫಲ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ವಿವಾದಿತ ಒಪ್ಪಂದಕ್ಕೆ ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‍ನ 202 ಮತಗಳು ಮಾತ್ರ ಬಂದಿವೆ. ಕನ್ಸರ್ವೇಟಿವ್ ಪಕ್ಷದ 118 ಸಂಸದರು ಈ ಯೋಜನೆ ವಿರುದ್ಧ ಮತದಾನ ಮಾಡಿದ್ದಾರೆ.

ಅಲ್ಲದೆ, ಥೆರೆಸಾ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಲು ತೀರ್ಮಾನಿಸಲಾಗಿದ್ದು, ವಿಪಕ್ಷ ನಾಯಕ ಜೆರೆಮಿ ಕೊರ್ಬೈನ್ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎನ್ನಲಾಗಿದೆ.

ತಮ್ಮ ಯೋಜನೆಗೆ ಸೋಲಾಗುತ್ತಿದ್ದಂತೆ ಥೆರೆಸಾ ಅವರು, ಇತರೆ ಪಕ್ಷಗಳೊಂದಿಗೆ ಚರ್ಚಿಸಿ ಇದನ್ನು ಅಂತಿಮಗೊಳಿಸಲಾಗುತ್ತಿದೆ. ಎಲ್ಲರೂ ಸಮ್ಮತಿ ಸೂಚಿಸುವಂತೆ ಹಾಗೂ ಪಕ್ಷಗಳು ಭವಿಷ್ಯದ ಬಗೆಗೆ ಚಿಂತನೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.