ಬೆಂಗಳೂರು:(ಜ16): ಮುಂಬರುವ ಲೋಕಸಭಾ ಚುನಾವಣಾ ಡೇಟ್ ಫಿಕ್ಸಾಗಿಲ್ಲ, ಆದ್ರೆ ವಾಟ್ಸಪ್‍ನಲ್ಲಿ ಚುನಾವನಾ ಡೇಟ್ ಫಿಕ್ಸಾಗಿರೋ ಲೀಸ್ಟ್ ಒಂದು ಹರಿದಾಡ ತೊಡಗಿತ್ತು. ಆದ್ರೆ ಅದೀಗ ಸುಳ್ಳು ಸುದ್ದಿ ಎಂಬುದು ಬೆಳಕಿಗೆ ಬಂದಿದೆ.

ಬೂಮ್ ಲೈವ್ ಈ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ. ಚುನಾವಣಾ ದಿನಾಂಕ ಫಿಕ್ಸಾಗಿಲ್ಲ ಎಂದು ಮಹಾರಾಷ್ಟ್ರ ರಾಜ್ಯದ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತರಾದ ಅವಿನಾಶ್ ಸನಸ್ ಹೇಳಿದ್ದಾರೆಂದು ಬೂಮ್ ಲೈವ್ ವರದಿ ಮಾಡಿದೆ.

ಹಾಗೆಯೇ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್‍ನಲ್ಲಿಯೂ ಚುನಾವಣಾ ದಿನಾಂಕ ಪ್ರಕಟವಾಗಿಲ್ಲ.

ಲೋಕಸಭಾ ಚುನಾವಣಾ ದಿನಾಂಕ ಫಿಕ್ಸಾಗಿದೆ ಎಂದು ಸುಳ್ಳು ಸುದ್ದಿ ಹರಿದಾಡಿದ್ದು, ಇನ್ನೂ ಚುನಾವಣ ದಿನಾಂಕ ಫಿಕ್ಸಾಗಿಲ್ಲ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.