ಶಿವಮೊಗ್ಗ(ಜ:05): ಸಹಿಷ್ಣುತೆ ಹಾಗೂ ಸಾಮರಸ್ಯದ ಬದುಕು ನಡೆಸುವುದು ಅಗತ್ಯವಿದೆ ಎಂದು ಧರ್ಮಗುರು ಅಬ್ದುಲ್ ಲತೀಫ್ ಮೌಲಾನಾ ಪ್ರತಿಪಾದಿಸಿದ್ದಾರೆ.

ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು ಭಾರತ ಒಂದು ಪವಿತ್ರವಾದ ದೇಶ, ಎಲ್ಲಾ ಧರ್ಮದವರು ಒಂದೇ ತೋಟದ ಹೂವುಗಳಂತೆ ಬದುಕುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿವಿಧ ಜಾತಿ,ಧರ್ಮಗಳು ಒಂದೇ ಊರಿನಲ್ಲಿ ನೆಲೆಸಿದರೆ ಆ ಊರಿನ ಸೌಂದರ್ಯ ಹೆಚ್ಚಾಗುತ್ತದೆ. ಸಹಿಷ್ಣುತೆ ಹಾಗೂ ಸಾಮರಸ್ಯ ಅವರ ಧ್ಯೇಯವಾಗಬೇಕು ಎಂದರು .