ಚಾಮರಾಜನಗರ:(ಫೆ12): ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮುಂದೂಡಿದ್ದಾರೆ.ಈಗಾಗಲೇ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧನದ ಕಲಾವಧಿಯನ್ನು ಫೆ 26 ರವರೆಗೆ ಮುಂದೂಡಲಾಗಿದೆ.

ಇಂದು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಆರೋಪಿಯಾದ ಇಮ್ಮಡಿ ಮಹದೇವಸ್ವಾಮಿ ಪರ ವಕೀಲರು ಲಿಖಿತ ರೂಪದಲ್ಲಿ ವಾದ ಮಂಡಿಸಿದರೆ, ಇನ್ನುಳಿದ ಆರೋಪಿಗಳ ಪೈಕಿ ಮಾದೇಶ, ದೊಡ್ಡಯ್ಯ, ಅಂಬಿಕಾ ಅವರಿಗೆ ನಿಮ್ಮ ಪರ ವಾದ ಮಂಡಿಸಲು ವಕೀಲರು ಇದ್ದಾರ ಎಂದು ನ್ಯಾಯಧೀಶರು ಕೇಳಿದ ಪ್ರಶ್ನೆಗೆ ಆರೋಪಿಗಳಿಂದ ಬಂದ ಉತ್ತರ, ನಮ್ಮ ಪರವಾದ ಮಂಡಿಸಲು ಬೆಂಗಳೂರಿನ ದುರ್ಗ ಪ್ರಸಾದ್ ಎಂಬ ವಕೀಲರು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಬಂದು ವಕಾಲತು ಅರ್ಜಿ ಸಲ್ಲಿಸಲಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆಂದು ತಿಳಿದು ಬಂದಿದೆ.