ಮೈಸೂರು(ಡಿ.೦೫) ರಾಜ್ಯದಲ್ಲಿ ಕುತೂಹಲವನ್ನು ಕೆರಳಿಸಿರುವ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯು ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

ಇನ್ನು ಈ ಉಪಚುನಾವಣೆಯಲ್ಲಿ ಆಶ್ಚರ್ಯಪಡುವ ಸಂಗತಿ ಎಂದರೆ ಕೆ.ಆರ್.ಪೇಟೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜ್ ಅವರು ಮತಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿಲ್ಲ ಎಂದು ಆರೋಪಿಸಿ ಮತಯಂತ್ರವನ್ನೇ ತಿರುಗಿಸಿ ಮತದಾನ ಮಾಡಿರುವ ಘಟನೆ ನಡೆದಿದೆ.

ಕೆ.ಆರ್. ಪೇಟೆಯ ಬಂಡಿಹೊಳೆಗೆ ಕುಟುಂಬ ಸಮೇತರಾಗಿ ಮತದಾನ ಮಾಡಲು ತೆರಳಿದ್ದ ಬಿ.ಎಲ್. ದೇವರಾಜ್ ಅವರು ಮತಗಟ್ಟೆ 151 ರಲ್ಲಿ ಮತದಾನ ಮಾಡಲು ಅವರು ಆಗಮಿಸಿದ ವೇಳೆ ಮತಯಂತ್ರ ವಾಸ್ತು ಪ್ರಕಾರ ಇಲ್ಲ ಎಂದು ಆರೋಪಿಸಿ ಕೂಡಲೇ ಮತಗಟ್ಟೆ ಸಿಬ್ಬಂದಿಗಳನ್ನು ಕರೆದು ಮತಯಂತ್ರವನ್ನು ತಿರುಗಿಸಿ ಮತದಾನ ಮಾಡಿದ್ದಾರೆ.