ಶಿವಮೊಗ್ಗ(ಡಿ :೨೪): ಶಿವಮೊಗ್ಗದ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಹತ್ತಿರದ ಕೆರೆಯ ಬಳಿ ಪಾರ್ಟಿ ಮಾಡಲು ಹೋದ ಕುಖ್ಯಾತ ರೌಡಿ ಬಂಕ್ ಬಾಲು ಎಂಬುವನನ್ನು ದುಷ್ಕರ್ಮಿಗಳು ಮಚ್ಚು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ಕೊಲೆಗೆ ವಯಕ್ತಿಕ ಕಾರಣದಿಂದ ಎಂಬುದು ಸಾರ್ವಜನಿಕ ವಲಯದಿಂದ ತಿಳಿದು ಬಂದಿದೆ. ಶಿವಮೊಗ್ಗ ಗ್ರಾಮಾಂತರ ವಲಯದಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.