ನವದೆಹಲಿ(ಜ:03):ಪಂಜಾಬ್ ನ ಜಲಂಧರ್ ನಲ್ಲಿ ನಡೆಯಲಿರುವ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಜಲಂಧರ್ ನ ಲವ್ಲಿ ಪ್ರೊಫೆಷ್ನಲ್‌ ವಿಶ್ವ ವಿದ್ಯಾಲಯದಲ್ಲಿ ಜ.3 ರಿಂದ 7ರವರೆಗೆ ಈ ಸಮಾವೇಶ ನಡೆಯಲಿದ್ದು ವಿಜ್ಞಾನಿಗಳು,ಇಸ್ರೋ,ಏಮ್ಸ್,ಯುಜಿಸಿ ಮತ್ತು ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ಭವಿಷ್ಯದ ಭಾರತ-ವಿಜ್ಞಾನ ಮತ್ತು ತಂತ್ರಜ್ಞಾನ’ ಈ ಸಮ್ಮೇಳನದ ಸದುದ್ದೇಶವಾಗಿದೆ.