ಲಂಡನ್(ಮಾ:22): ಮೇ 30ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಗೆ ಗುರುವಾರ ಎಲ್ಲಾ ಸ್ಟೇಡಿಯಂಗಳಲ್ಲಿ ಮತ್ತೊಮ್ಮೆ ಟಿಕೆಟ್ ಮಾರಾಟ ಆರಂಭವಾಗಿದ್ದು,ಮೊದಲ ಬಾರಿ ಟಿಕೆಟ್ ಖರೀದಿಸಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಆರು ಉಪಖಂಡಗಳಲ್ಲಿ ಒಟ್ಟು 148 ದೇಶಗಳಿಂದ ಅಂದಾಜು 8,00,000 ಟಿಕೆಟ್ ಗಳಿಗಾಗಿ 3 ಮಿಲಿಯನ್ ಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ,ಟಿಕೆಟ್ ಪಡೆಯುವುದರಿಂದ ವಂಚಿತರಾದ ಕ್ರಿಕೆಟ್ ಅಭಿಮಾನಿಗಳಿಗೆ ತಕ್ಷಣವೇ ಟಿಕೆಟ್ ಪಡೆಯಲು ಮಗದೊಂದು ಅವಕಾಶ ಕಲ್ಪಿಸಲಾಗಿದೆ.

ಸಿಡಬ್ಲುಸಿ ಅಕ್ರಮ ಟಿಕೆಟ್ ಮರು ಮಾರಾಟ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದು, ಅನಧಿಕೃತ ಮೂರನೇ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ಟಿಕೆಟ್‌ಗಳನ್ನು ರದ್ದುಪಡಿಸಲು ಕ್ರಮಕೈಗೊಂಡಿದ್ದೇವೆ ಎಂದು ಐಸಿಸಿ ಅಧಿಕಾರಿ ತಿಳಿಸಿದ್ದಾರೆ.