ಬೆಂಗಳೂರು:(ಫೆ22): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಗಂಡುಗಲಿ ಮದಕರಿ ನಾಯಕ” ಸಿನಿಮಾಕ್ಕೆ ನಾಯಕಿಯನ್ನು ಸೆಲೆಕ್ಟ್ ಮಾಡಲಾಗಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ನಟಿಸುತ್ತಿರುವುದು ತಮಿಳಿನ ಖ್ಯಾತ ನಟಿ ಕೀರ್ತಿ ಸುರೇಶ್.

ಹೌದು ಈ ಸಿನಿಮಾದಲ್ಲಿ ದರ್ಶನ್‍ಗೆ ನಾಯಕಿಯಾಗಿ ನಟಿ ಕೀರ್ತಿ ಸುರೇಶ್ ನಟಿಸಲ್ಲಿದ್ದು, ದಚ್ಚು ಜೊತೆಗೆ ನಟಿಸಲು ಕೀರ್ತಿ ಸುರೇಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸ್ಯಾಂಡಲ್‍ವುಡ್‍ಗೆ ನಟಿ ಕೀರ್ತಿ ಸುರೇಶ್ “ಗಂಡುಗಲಿ ಮದಕರಿ ನಾಯಕ” ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಕೀರ್ತಿ ಸುರೇಶ್ “ಮಹಾನಟಿ” ಸಿನಿಮಾದ ಮೂಲಕ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದು, ಇವರ ನಟನೆಯನ್ನು ನೋಡಿ “ಗಂಡುಗಲಿ ಮದಕರಿ ನಾಯಕಿ ಸಿನಿಮಾದ ನಿರ್ದೇಶಕಾರ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾಕ್ಕೆ ನಾಯಕಿಯಾಗಲು ಇವ್ರೆ ಸರಿ ಎಂದಿದ್ದಾರೆ.

ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಹಂಸಲೇಖ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇನ್ನು ಚಿತ್ರದ ಮುಹೂರ್ತ ಕಾರ್ಯವು ಕೆಲವೇ ದಿನಗಳಲ್ಲಿ ನಡೆಯಲಿದೆ ಎನ್ನಲಾಗಿದೆ.