ವಾಷಿಂಗ್‍ಟನ್;(ಫೆ04): ಮುಂಬರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಪ್ರಥಮ ಹಿಂದೂ ಸಂಸದೆಯಾದ ತುಳಸಿ ಗಬಾರ್ಡ್ ಹೇಳಿಕೆ ನೀಡಿದ್ದಾರೆ.

ಅಲ್ಲಿನ ಕಾಂಗ್ರೇಸ್‍ಗೆ ಆಯ್ಕೆಯಾದ ಮೊದಲ ಹಿಂದೂ ಸಂಸದೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರು 2020 ರ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪಧಿಸುತ್ತೇನೆಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ರಾಜಕೀಯದಲ್ಲಿ ಲಾಭ ಪಡೆಯುವ ರಾಜಕರಣಿಗಳ ವಿರುದ್ಧ ಸ್ಪರ್ಧಿಸಿ ಅಧ್ಯಕ್ಷೀಯ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅವರು ನನಗೆ ಸಹಕರಿಸಿ ಎಂದು ಅಲ್ಲಿನ ಜನತೆಗೆ ಮನವಿ ಮಾಡಿದ್ದಾರೆ.