ಬೆಂಗಳೂರು(ಅ.14) ಕನ್ನಡದಲ್ಲಿ ಬಿಗ್ ಬಾಸ್ ಸೀಸನ್-7 ನಿನ್ನೆಯಷ್ಟೇ ಭಾನುವಾರದಂದು ಪ್ರಾರಂಭವಾಗಿದ್ದು, 18 ಜನ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 7 ನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ವಿಶೇಷವೇನೆಂದರೆ ಮೊದಲನೇ ದಿನವೇ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರು ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ಹೌದು ಅಷ್ಟಕ್ಕೂ ಬಿಗ್ ಬಾಸ್ ಮನೆಯಿಂದ ಹೊರಬಂದ ಆ ಸ್ಪರ್ಧಿ ಪತ್ರಕರ್ತರಾದ ರವಿ ಬೆಳಗೆರೆ. ರವಿ ಬೆಳಗೆರೆಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆ ಕಾರಣದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆ ಪ್ರವೇಶಿಸುವಾಗಲೇ ರವಿ ಬೆಳಗೆರೆಯವರಿಗೆ ಅರೋಗ್ಯ ಸ್ಥಿತಿ ಸರಿ ಇರಲಿಲ್ಲ.

ಬಿಗ್​ ಬಾಸ್​ ಮನೆಯಲ್ಲಿ ಅದರದ್ದೇ ಆದ ಕೆಲವು ನಿಯಮಗಳಿವೆ. ಅಲ್ಲಿ ಸ್ಪರ್ಧಿ ತನಗಿಷ್ಟ ಬಂದಂತೆ ನಡೆದುಕೊಳ್ಳಲು ಸಾಧ್ಯವೇ ಇಲ್ಲ. ಆಹಾರದಲ್ಲಿ ವ್ಯತ್ಯಯ ಉಂಟಾಗಿ ರವಿ ಬೆಳಗೆರೆ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿದೆ ಆದ ಕಾರಣ ರವಿ ಬೆಳಗೆರೆಯವರು ಬಿಗ್ ಬಾಸ್ ಮನೆಯಿಂದ ಹೊರಬಂದು ತಮ್ಮ ನಿವಾಸದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ.