ಭೋಪಾಲ್(ಡಿ.21): ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೊಸ ಬಂಗಲೆಯಲ್ಲಿ ವಾಸ ಮಾಡುತ್ತಿದ್ದು, ಯಾವುದೇ ಹಿಂಜರಿಕೆಯಿಲ್ಲದೆ ನನ್ನ ಭೇಟಿಯಾಗಿ ನನ್ನ ಮನೆಯ ಬಾಗಿಲು ಯಾವಾಗಲೂ ನಿಮಗೋಸ್ಕರ ತೆರೆದಿರುತ್ತದೆ ಎಂದು ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.

ಇಂದಿನಿಂದ ನಿಮ್ಮನ್ನು ನನ್ನ ಹೊಸ ಬಿ-8 74 ಬಂಗಲೆಯಲ್ಲಿ ಭೇಟಿ ಮಾಡುತ್ತೇನೆ. ಈ ಮನೆ ಹಿಂದೆ ಇದ್ದ ಮನೆಗಿಂತ ಚಿಕ್ಕದಾಗಿದೆ. ಆದರೆ ಹೃದಯ ಮಾತ್ರ ಎಂದೆಂದಿಗೂ ದೊಡ್ಡದಾಗಿದೆ ಎಂದಿದ್ದಾರೆ.

ಈ ಬಾರಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದರು.