ಆಕ್ಲ್ಯಾಂಡ್(ಫೆ:08): ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ದ್ವಿತೀಯ ಟಿ 20 ಪಂದ್ಯದಲ್ಲಿ ಕಿವೀಸ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟೀಮ್ ಇಂಡಿಯಾದ ಸರಣಿ ವಶಪಡಿಸಿಕೊಳ್ಳುವ ಆಸೆ ಜೀವಂತ ಉಳಿದಿದೆ.

ಮೊದಲು ಬ್ಯಾಟಿಂಗ್ ಆಡಿದ ನ್ಯೂಜಿಲ್ಯಾಂಡ್ ಎಂಟು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು,ಮಾಧ್ಯಮ ಕ್ರಮಾಂಕದ ಆಟಗಾರ ಕಾಲಿನ್ ಡಿ ಗ್ರಾಂಡ್ ಹೋಮ್ 50 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಆದರು.

ಇನ್ನು ಭಾರತದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಭರ್ಜರಿ 4 ಸಿಕ್ಸರ್ ಗಳೊಂದಿಗೆ ರೋಹಿತ್ ಶರ್ಮ 50 ರನ್ ಗಳಿಸಿದರೆ,ಶಿಖರ್ ಧವನ್ 30 ರನ್ ಗಳಿಸಿ ಔಟಾದರು,ನಂತರ ಧೋನಿ ಜೊತೆಗೂಡಿದ ರಿಷಬ್ ಪಂತ್ 40 ರನ್ ಗಳಿಸಿ ಅಜೇಯರಾದರು,ರಿಷಬ್ ಗೆ ಉತ್ತಮ ಸಾಥ್ ನೀಡಿದ ಧೋನಿ 20 ರನ್ ಗಳಿಸಿ ನಾಟೌಟ್ ಆಗಿ ಉಳಿದರು.