ತಮಕೂರು:(ಜೂನ್.12): ಕೈಗಾರಿಕ ಪ್ರದೇಶದಿಂದ ಸ್ಥಳೀಯರಿಗಾಗುವ ಅನಾನುಕೂಲದ ಕುರಿತು ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಬೇಳೂರು ಬಾಯರ್ಸ ಮೆಡಿಷನ್ ಕಂಪನಿಯ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ಬೇಳೂರು ಬಾಯರ್ಸ ಮೆಡಿಷನ್ ಕಂಪನಿ ಮಾಲೀಕನ ಸೂಚನೆಯಂತೆ ಹಾಗೂ ಮ್ಯಾನೇಜರ್ ವೆಂಕಟರಮಣ ಪ್ರಚೋದನೆಯಿಂದ ಸಿಬ್ಬಂದಿಗಳು ಮಾಧ್ಯಮದ ವರದಿಗಾರರನ್ನು ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಜೂನ್ 08 ರಂದು ಈ ಕೈಗಾರಿಕೆಯಲ್ಲಿ ರಿಯಾಕ್ಟರ್ ಸ್ಫೋಟಗೊಂಡು ಹಲವರು ಗಾಯಗೊಳ್ಳುವುದರ ಜೊತೆಗೆ ಮನೆಗಳ ಮೇಲೆಯೂ ಹಾನಿ ಉಂಟಾಗಿತ್ತು. ಈ ಸಂಬಂಧ ಕೈಗಾರಿಕೆಯಿಂದ ಸ್ಥಳಿಯರ ಮೇಲಾಗುವ ಪರಿಣಾಮದ ಕುರಿತು ರಾಜ್‍ನ್ಯೂಸ್‍ನ ವರದಿಗಾರರಾದ ಎನ್.ಜಿ ಹಳ್ಳ ಮಹೇಶ್ ಹಾಗೂ ಕ್ಯಾಮರಾಮನ್ ದೇವರಾಜ್ ಸೇರಿದಂತೆ ಇನ್ನೂ ಮೂರು ಖಾಸಗಿ ಚಾನಲ್‍ನ ವರದಿಗಾರರು ವರದಿ ಮಾಡಲು ಹೋಗಿದ್ದರು. ಈ ವೇಳೆ ಮಾಧ್ಯಮದವರಿಗೆ ಕೈಗಾರಿಕೆಯ ಒಳಗೂ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದರಿಂದ ಹೊರಗೆಯೇ ನಿಂತು ಪ್ಯಾಕ್ಟರಿಯಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಮಾಧ್ಯಮದವರ ಮೇಲೆ ಪ್ಯಾಕ್ಟರಿಯ ಸಿಬ್ಬಂದಿಗಳು ದಾಳಿ ನಡೆಸಿ ರೂಂ ನಲ್ಲಿ ಕೂಡಿಹಾಕಿ ಮರಣಾಂತಿಕ ಹಲ್ಲೆ ಮಾಡಿದ್ದಾರೆ.

ದಾಳಿಯ ವೇಳೆ ಕ್ಯಾಮರಾ ಹಾಗೂ ಟ್ರೈಪಾಡ್ ಜಖಂ ಗೊಳ್ಳುವುದರ ಜೊತೆಗೆ ಕ್ಯಾಮರಾ ಮನ್ ದೇವರಾಜ್ ಹಾಗೂ ಚಂದನ್ ಗಂಭೀರ ಗಾಯಗೊಂಡಿದ್ದು, ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ಯಾಕ್ಟರಿಯಾ ಮ್ಯಾನೇಜರ್ ವೆಂಕಟರಮಣ ಸೇರಿದಂತೆ 4 ಜನರನ್ನು ಬಂಧಿಸಲಾಗಿದೆ.