ಮುಂಬೈ(ಫೆ:04): ಭಾರತೀಯ ಕ್ರಿಕೆಟ್ ತಂಡ ಜಗತ್ತಿನ ಯಾವುದೇ ಭಾಗದಲ್ಲೂ ಆಡುವಷ್ಟು ಸ್ಪರ್ಧಾತ್ಮಕವಾಗಿದೆ ಎಂದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ,ಮುಂಬರುವ ವಿಶ್ವಕಪ್ ನಲ್ಲಿ ನಮ್ಮ ತಂಡವೇ ನನಗೆ ಫೇವರೆಟ್ ಎಂದು ಹೇಳಿದ್ದಾರೆ.

ನಮ್ಮ ತಂಡದಲ್ಲಿ ಪರಿಪೂರ್ಣ ಸಮತೋಲನ ಇರುವುದರಿಂದ ಎಲ್ಲಿ ಬೇಕಾದರೂ ಆಡುವಷ್ಟು ಸಮರ್ಥವಾಗಿದೆ,ಆಟದ ಆರಂಭದಲ್ಲೇ ಕೈಗೊಳ್ಳುವ ವೇಗ ಹೆಚ್ಚು ಪರಿಣಾಮ ಬೀರುತ್ತದೆ ಎಂದಿರುವ ಅವರು,ಭಾರತಕ್ಕೆ ಇಂಗ್ಲೆಂಡ್ ತಂಡವೇ ಅತ್ಯಂತ ಪ್ರಭಲ ಪ್ರತಿಸ್ಪರ್ಧಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಬ್ಯಾಡ್ ಅವರ್ಸ್ ಇದ್ದಾರೆ ಅರ್ಧದಷ್ಟು ಆಟ ಕೆಡುತ್ತದೆ ಇಂದು ಕಿವಿಮಾತನ್ನು ಹೇಳಿದ್ದಾರೆ.