ಮಂಡ್ಯ(ಮಾ:15): ಮಂಡ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯಾದ್ಯಂತ ಸಂಚಾರ ನಡೆಸುತ್ತಿದ್ದು,ಹಲವಾರು ಕಾರ್ಯಕರ್ತರನ್ನು,ಅಭಿಮಾನಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.

ಮೇಲುಕೋಟೆಗೆ ಆಗಮಿಸಿದ ಸುಮಲತಾ ಅವರಿಗೆ ಅಂಬರೀಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭವ್ಯ ಸ್ವಾಗತ ನೀಡಿದರು,ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ,ಆದರೆ ನಾಯಕರ ನಿರ್ಧಾರಗಳಿಂದ ಮಂಡ್ಯದಲ್ಲಿ ಪಕ್ಷಕ್ಕೆ ಮೋಸವಾಗುತ್ತಿದೆ,ನನ್ನ ಜೊತೆ ಮಂಡ್ಯದಲ್ಲಿ ಅಂಬರೀಶ್ ಅವರು ಸಂಪಾದಿಸಿದ ಜನರ ಪ್ರೀತಿ ಇದೆ,ನನ್ನ ಬೆಂಬಲಕ್ಕೆ ಜನರಿದ್ದಾರೆ ಎಂದರು.