ಬೆಂಗಳೂರು(ಜ.15) : ನಮ್ಮ ಪಕ್ಷದ ಯಾವ ಶಾಸಕರು ಬಿಜೆಪಿ ಸೇರ್ಪಡೆ ಆಗಲ್ಲ. ನಮ್ಮವರನ್ನು ಎಲ್ಲಿಯೇ ಕೂಡಿ ಹಾಕಿದ್ರು ಅವರನ್ನು ಕರೆತರುವ ಶಕ್ತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿ, ರಾಜಕೀಯದಲ್ಲಿ ಎರಡು ಆಟಗಳಿರುತ್ತವೆ. ಎಲ್ಲವನ್ನು ಮಾಧ್ಯಮಗಳ ಮುಂದೆ ಹೇಳೋದಕ್ಕೆ ಸಾಧ್ಯವಿಲ್ಲ. ಅವರ ಪಾರ್ಟಿಯ ಶಾಸಕರನ್ನು ಅವರು ಹೇಗಾದರೂ ಕೂಡಿಹಾಕಿಕೊಳ್ಳಲಿ. ಮೊದಲಿನಿಂದಲ ಬಿಜೆಪಿಯವರು ಹತಾಶರಾಗಿದ್ದು, ಅವರು ಆಸೆ ಪಡುವುದು, ಹತಾಶರಾಗುವುದು ಇದೆಲ್ಲವೂ ಅವರಿಗೆ ಬಿಟ್ಟಿರುವ ವಿಚಾರವಾಗಿದೆ ಎಂದಿದ್ದಾರೆ.