ನವದೆಹಲಿ:(ಫೆ18): ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ 44 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣವನ್ನು ಬಿಟ್ಟಿದ್ದಾರೆ. ಈ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲು ಬಿಸಿಸಿಐ ಮುಂದೆ ಬಂದಿದೆ.

ಆರ್ಥಿಕ ನೆರವು ನೀಡುವ ಸಲುವಾಗಿ ಬಿಸಿಸಿಐ ನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಸುಪ್ರೀಂ ಕೋರ್ಟ್‍ನ ನೇಮಿತ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬಿಸಿಸಿಐ ಕನಿಷ್ಠ 5 ಕೋಟಿ ನೆರವು ನೀಡ ಬೇಕು ಎನ್ನಲಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಬಿಸಿಸಿಐ ನೊಂದಿಗೆ ನೋಂದಾಯಿತ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಹಾಗೂ ಐಪಿಎಲ್ ಫ್ರಾಂಚೈಸಿ ಮಾಲೀಕರಿಗೂ ಧನ ಸಹಾಯ ಮಾಡುವಂತೆ ಖನ್ನಾ ಮನವಿ ಮಾಡಿದ್ದಾರೆ.

ಭಾರತ ಆಸ್ಟ್ರೇಲಿಯ ಸರಣಿ ಪಂದ್ಯದಲ್ಲಿ ಹಾಗೂ ಐಪಿಎಲ್ ಉದ್ಘಾಟನೆಯ ವೇಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಕೂಡ ಮನವಿ ಮಾಡಿದ್ದಾರೆ. ಉಗ್ರರ ದಾಳಿಯನ್ನು ಕಂಡಿಸುತ್ತೇವೆ ಎಂದು ಹೇಳುವುದರ ಜೊತೆಗೆ ಹುತಾತ್ಮ ಯೋಧರ ನೆರವಿಗೂ ಕೂಡ ಮುಂದಾಗಿದ್ದಾರೆ.