ಬೆಂಗಳೂರು(ಜೂ:03): ನಗರದಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಭಾನುವಾರ ಧಾರಾಕಾರವಾಗಿ ಸುರಿಯಿತು. ನಗರದಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಭಾನುವಾರ ಧಾರಾಕಾರವಾಗಿ ಸುರಿಯಿತು. ಮಳೆ ಗಾಳಿಯ ಕಾರಣ 12 ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ. ಪೀಣ್ಯ, ಯಶವಂತಪುರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ದೀಪಾಂಜಲಿ ನಗರ, ರಾಜರಾಜೇಶ್ವರಿನಗರ, ಕೆಂಗೇರಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಬಸವನಗುಡಿ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ಸದಾಶಿವನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ.

ವಿದ್ಯಾರಣ್ಯಪುರ, ಎಚ್‌ಬಿಆರ್‌ ಲೇಔಟ್, ಎಚ್‌ಎಂಟಿ ಲೇಔಟ್, ಮಲ್ಲೇಶ್ವರ, ಸಂಪಂಗಿರಾಮನಗರ, ಬಾಣಸವಾಡಿ, ರಾಮಮೂರ್ತಿನಗರ, ಕಮ್ಮನಹಳ್ಳಿ, ಎಂ.ಜಿ.ರಸ್ತೆ, ಇಂದಿರಾನಗರ, ಕೋರಮಂಗಲ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು.

ಎಚ್‌ಬಿಆರ್ ಲೇಔಟ್, ಸಹಕಾರನಗರ ಹಾಗೂ ವಿದ್ಯಾರಣ್ಯಪುರದಲ್ಲಿ ತಲಾ ಎರಡು ಮರಗಳು ಉರುಳಿಬಿದ್ದವು. ಜೈನ್ ಕಾಲೇಜು, ಎಚ್‌ಎಂಟಿ ಲೇಔಟ್, ಕೊಡಿಗೇಹಳ್ಳಿ, ಭದ್ರಪ್ಪ ಲೇಔಟ್, ಲುಂಬಿನಿ ಗಾರ್ಡನ್ ಹಾಗೂ ಸುಲ್ತಾನ್‌ಪಾಳ್ಯದಲ್ಲಿ ತಲಾ ಒಂದೊಂದು ಮರಗಳು ಉರುಳಿ ಬಿದ್ದಿವೆ. ಬಿಬಿಎಂಪಿ ಸಿಬ್ಬಂದಿ ತಡರಾತ್ರಿಯವರೆಗೂ ಮರಗಳ ತೆರವು ಕೆಲಸದಲ್ಲಿ ನಿರತರಾಗಿದ್ದರು.

ಮಳೆಯಿಂದಾಗಿ ಚಾಲುಕ್ಯ ವೃತ್ತ, ನೃಪತುಂಗ ರಸ್ತೆ, ಮೆಜೆಸ್ಟಿಕ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಹೆಚ್ಚಾಗಿತ್ತು.
ಕೆಲವೆಡೆ ರಸ್ತೆ ಮೇಲೆಯೇ ಮರಗಳು ಬಿದ್ದಿದ್ದರಿಂದ, ಅಲ್ಲೆಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಅದು ಸಹ ಸಂಚಾರ ದಟ್ಟಣೆಗೆ ಕಾರಣವಾಯಿತು.