ಲಖನೌ:(ಫೆ22): ಜೈಶ್ ಇ ಮೊಹಮದ್ ಸಂಘಟನೆಯ ಇಬ್ಬರು ಉಗ್ರರನ್ನು ಸೆರೆ ಹಿಡಿದು ಬಂದಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಇಬ್ಬರು ಉಗ್ರರು ಜೈಶ್ ಇ ಮೊಹಮದ್ ಸಂಘಟನೆಯ ಸದಸ್ಯರೆಂದು ತಿಳಿದುಬಂದಿದೆ.

ಈ ಉಗ್ರರು ಉತ್ತರ ಪ್ರದೇಶದ ಖಂಕಾಹ್‍ನಲ್ಲಿ ಖಾಸಗಿ ಹಾಸ್ಟೆಲ್‍ನಲ್ಲಿದ್ದು, ಶಹನವಾಜ್ ಅಹ್ಮತ್ ತೆಲಿ ಹಾಗೂ ಅಕಿಬ್ ಎಂಬ ಉಗ್ರರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರನ್ನು ಬಂಧಿಸುವ ವೇಳೆ ಇವರ ಹತ್ತಿರ ಎರಡು ಬಂದೂಕು ಹಾಗೂ ಎರಡು ಕಾಟ್ರ್ರಿಡ್ಜ್‍ಗಳಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರರು ಕಾಶ್ಮೀರ ಮೂಲದವರು ಎಂದು ಉತ್ತರ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಉಗ್ರ ಸಂಘನೆಗೆ ಹಣ ಸಂಗ್ರಹ ಮಾಡಲು ಉತ್ತರ ಪ್ರದೇಶಕ್ಕೆ ಬಂದಿದ್ದರೆಂದು ಪೊಲೀಸರು ತಿಳಿಸಿದ್ದು, ಇನ್ನು ಬಂಧಿಸಿದ ಇಬ್ಬರು ಉಗ್ರರನ್ನು ತನಿಖೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಉಗ್ರರನ್ನು ಬಂಧಿಸುವ ಮೂಲಕ ಯಶಸ್ಸು ಕಂಡಿದ್ದಾರೆ.