ವಿಯಯಪುರ(ಜೂ:03): ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಹತ್ಯೆಯ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತೌಫಿಕ್ ಶೇಕ್ ಅಲಿಯಾಸ್ ಪೈಲ್ವಾನ್ ಎಂಬಾತನನ್ನು ಬಂಧಿಸಲಾಗಿದೆ. ಧೂಳಖೇಡ ಗ್ರಾಮದ ಸಮೀಪ ಆರೋಪಿಯ ಬಂಧನವಾಗಿದ್ದು ಬಸವನಬಾಗೇವಾಡಿ ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಆರೋಪಿ ತೌಫಿಕ್ ಸೊಲ್ಲಾಪುರದ ಎಂಐಎಂ ಮುಖಂಡನಾಗಿದ್ದಾನೆ. ಈತನ ವಿರುದ್ಧ ರೇಷ್ಮಾ ಪತಿ ಖಾಜಾ ಬಂದೇ ನವಾಜ್ ಪೋಲೀಸರಿಗೆ ದೂರು ನೀಡಿದ್ದರು. ಪೋಲೀಸರು ಆರೋಪಿಯ ವಿರುದ್ಧ ಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.