ಬೆಂಗಳೂರು(ನ.15) ಸ್ಯಾಂಡಲ್‌ವುಡ್‌ ನ ಕಿರಿಕ್ ಪಾರ್ಟಿಯ ಕ್ರಿಯೆಟಿವ್ ನಿರ್ದೇಶಕ ಬೆಲ್ ಬಾಟಮ್ ಖ್ಯಾತಿಯ ರಿಷಬ್ ಶೆಟ್ಟಿ ತಮ್ಮ ಮಗನ ಹೆಸರನ್ನು ಕ್ರಿಯೆಟಿವ್ ಆಗಿ ರಿವೀಲ್ ಮಾಡಿದ್ದಾರೆ.

ಅವರ ಸಿನಿಮಾಗಳು ಹೇಗೆ ವಿಭಿನ್ನವೋ ಅದೇ ರೀತಿ ತಮ್ಮ ಮಗನ ಹೆಸರನ್ನು ಸಿನಿಮಾ ಟೀಸರ್ ರೀತಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಮ್ಮನೆ ಮುದ್ದು ಮಗುವನ್ನ ನಿಮಗೆ ಪರಿಚಯ ಮಾಡಿಕೊಡ್ತಿದೀವಿ. ಮರಿ ಡಿಟೆಕ್ಟೀವ್ ಕಡೆಯಿಂದ ಎಲ್ರಿಗೂ ಹ್ಯಾಪಿ ಮಕ್ಕಳ ದಿನಾಚರಣೆ..! ಎಂದು ಹಾಸ್ಯಾಸ್ಪದವಾಗಿ ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿದ್ದಾರೆ.

ಮಗನಿಗೆ ರಣ್ವಿತ್ ಶೆಟ್ಟಿ ಎಂದು ಹೆಸರಿಟ್ಟಿದ್ದು, ಟೀಸರ್ ನಲ್ಲಿ ಮಗು ಕರ್ನಾಟಕ ಸಾರ್ವಭೌಮ ರಾಜ್ ಕುಮಾರ್ ಅವರ ಫೋಟೋ ಜೊತೆ ಆಟವಾಡುತ್ತಿರುವ ದೃಶ್ಯಗಳು ಸುಂದವಾಗಿವೆ. ಇನ್ನು ಟೀಸರ್ ಬೆಲ್ ಬಾಟಮ್ ಚಿತ್ರದ ಟೀಸರ್ ಶೈಲಿಯಲ್ಲಿರುವುದನ್ನು ನೋಡಬಹುದು.