ಹೈದರಾಬಾದ್(ಫೆ20): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯಿಂದ ಭಾರತ ಮತ್ತು ಪಾಕ್ ನಡುವಿನ ಸಂಬಂಧ ದಿನೆ ದಿನೇ ಕ್ಷೀಣಿಸುತ್ತಿದ್ದು, ಪಾಕ್ ವಿರುದ್ಧ ದೇಶದಲ್ಲಿ ದ್ವೇಷ ಕುದಿಯುತ್ತಿದೆ.

ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್‍ರನ್ನು ಮದುವೆಯಾದ ಸಾನಿಯಾ ಮಿರ್ಜಾರನ್ನು ತೆಲಂಗಾಣದ ರಾಯಭಾರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಶಾಸಕ ರಾಜಾ ಸಿಂಗ್ ವಿಡಿಯೋ ಸಂದೇಶ ಮೂಲಕ ಸಿಎಂ ಚಂದ್ರಶೇಖರ್ ರಾವ್ ಗೆ ಈ ರೀತಿ ಮನವಿ ಮಾಡಿದ್ದಾರೆ. ಭಾರತ ಸರ್ಕಾರ ಪಾಕ್ ಜತೆಗಿನ ಎಲ್ಲಾ ಬಾಂಧವ್ಯ ಕಡಿದುಕೊಳ್ಳುತ್ತಿರುವಾಗ ಪಾಕ್ ಸೊಸೆಯಾಗಿರುವ ಸಾನಿಯಾರನ್ನು ತೆಲಂಗಾಣದ ರಾಯಭಾರಿಯಾಗಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ರಾಜಾ ಸಿಂಗ್ ಹೇಳಿಕೊಂಡಿದ್ದಾರೆ.